ಕೋಯ್ಲರ್, ವುಲ್ಫ್‍ಗ್ಯಾಂಗ್
1887-. ಪ್ರಸಿದ್ಧ ಜರ್ಮನ್ ಮನಃಶಾಸ್ತ್ರಜ್ಞ. ಕಾರ್ಲ್ ಸ್ಟುಂಘನ ಬಳಿ ಉಚ್ಚಶಿಕ್ಷಣಕ್ಕೆಂದು ಸೇರುವ ಮುನ್ನ ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಕೋಯ್ಲರ್ ಸ್ಟುಂಘನ ಅನಂತರ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿ ನಿಯಮಿತನಾದ (1920). ಈ ನಡುವೆ 1913ರಿಂದ 1917ರ ವರೆಗೆ ಟೆನೆರಿಫ್ ದ್ವೀಪದಲ್ಲಿ ಬಂಧಿಸಲ್ಪಟ್ಟಿದ್ದಾಗ ನರವಾನರಗಳ ಮೇಲೆ ಅಧ್ಯಯನ ನಡೆಸಿ, ಉತ್ಕøಷ್ಟವಾದ ಗ್ರಂಥವೊಂದನ್ನು ರಚಿಸಿದ. ಸಮಷ್ಟಿ ಮನಃಶಾಸ್ತ್ರ (ಗೆಸ್ಟಾಲ್ಟ್ ಸೈಕಾಲಜಿ) ಪ್ರೌಢವಸ್ಥೆಯನ್ನು ಮುಟ್ಟಲು ಈತ 1920ರಲ್ಲಿ ಬರೆದ ಜರ್ಮನ್ ಗ್ರಂಥ ತುಂಬ ನೆರವಾಯಿತು. ಭೌತಶಾಸ್ತ್ರದ ಸಂವಿಧಾನಗಳನ್ನೂ ದೃಷ್ಟಿಕೊನವನ್ನೂ ಮಾನಸವಿವರಗಳ ಕಡೆ ಹರಿಸಿ ತನ್ನ ಸಿದ್ಧಾಂತವನ್ನು ಈತ ದೃಢಪಡಿಸಿದ್ದಾನೆ. ಕಾಫ್ಯಾನ ಸಹೋದ್ಯೋಗಿಯಾಗಿ ಹಲವಾರು ವರ್ಷಗಳು ಕೆಲಸಮಾಡಿ. ಆತ ಆರಂಭಿಸಿದ್ದ ಸೈಕಾಲಜಿಷ್ ಫಾರ್‍ಸಂಗ್ ಪತ್ರಿಕೆಗೆ ಈತ ಸಂಪಾದಕನಾಗಿದ್ದ. ಇಂಗ್ಲೆಂಡ್, ಅಮೆರಿಕ ದೇಶಗಳಲ್ಲಿ ಸಮಷ್ಟಿ ಸಿದ್ಧಾಂತ ಬೇರೂರಲು ಕೋಯ್ಲರ್ ಮಾಡಿದ ವ್ಯವಸಾಯವೇ ಮುಖ್ಯಕಾರಣ. ಸ್ಥಾಯಿ ಭೌತಿಕ ಸಮಷ್ಟಿಗಳ (ಸ್ಟ್ಯಾಟಿಕ್ ಫಿಸಿಕಲ್ ಗೆಸ್ಟಾಲ್ಟೆನ್) ಮೇಲೆ ಈತ 1920ರಲ್ಲಿ ಬರೆದ ಗ್ರಂಥ ಪ್ರಸಿದ್ಧವಾದುದು.					 (ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ